
2nd April 2025
ಯಾದಗಿರಿ: ರಾಜ್ಯ ಸರ್ಕಾರ ಅಗತ್ಯ ವಸ್ತುಗಳಬೆಲೆ ಏರಿಕೆ ಮಾಡುವ ಮೂಲಕ ಜನರ ಶಾಪಕ್ಕೆ ಗುರಿಯಾಗಿದೆ ಎಂದು ಮಾಜಿ ಸಚಿವ ನರಸಿಂಹ ನಾಯಕ ( ರಾಜುಗೌಡ) ಅವರೂ ಶಹಾಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮನುಷ್ಯ ಹುಟ್ಟಿದ ಮೇಲೆ ಸಾಯುವತನಕ ಬೇಕಾದ ಮೂಲಭೂತ ಅವಶ್ಯಕತೆಗಳ ದರ ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನರನ್ನು ಸುಲಿಗೆ ಮಾಡುತ್ತಿದೆ. ಪ್ರತಿ ಲೀಟರ್ ಹಾಲಿಗೆ 4 ರೂ.ಹೆಚ್ಚಳ ಮಾಡುವ ಮೂಲಕ ಶ್ರೀಸಾಮಾನ್ಯನ ಪರಿಸ್ಥಿತಿ ಗಂಭೀರಗೊಳಿಸಿದ್ದಾರೆ. ಸ್ಟಾಂಪ್ ಡ್ಯೂಟಿ, ಹೀಗೆ ಎಲ್ಲ ವಿಧದಲ್ಲೂ ದರ ಹೆಚ್ಚಳ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಕಸಕ್ಕೂ ತೆರಿಗೆ ಹಾಕುವ ವಿಚಿತ್ರ ಪದ್ಧತಿ ಜಾರಿಗೆ ತಂದಿದೆ. ಪಂಚ ಗ್ಯಾರಂಟಿಯೋ ಅಥವಾ ಪಂಚ್ ಗ್ಯಾರಂಟಿಯೋ ತಿಳಿಯದಾಗಿದೆ. ಈ ದರ ಹೆಚ್ಚಳ ಖಂಡಿಸಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ನಮ್ಮ ಪಕ್ಷದ ಎಲ್ಲ ಶಾಸಕರು ಮಾಜಿ ಶಾಸಕರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬುಧವಾರ ಬೆಳಗ್ಗೆಯಿಂದ ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಆಯೋಜಿಸಲಾಗಿದೆ ಆಯೋಜಿಸಲಾಗಿದ್ದ ಎಂದರು.
ನಮ್ಮಲ್ಲಿ ನೀರು ಇಲ್ಲದಿದ್ದರೆ ತೆಲಂಗಾಣಕ್ಕೆ ಯಾಕೆ ಹರಿಸಿದ್ದೀರಿ. ಸುಮಾರು 10 ಟಿಎಂಸಿ ನೀರು ಹರಿಸಲಾಗಿದೆ ಈ ಬಗ್ಗೆ ತನಿಖೆ ನಡೆಸಬೇಕು. 5 ದಿನ ನಿರಂತರ ನೀರು ಹರಿಸಲಾಗಿದೆ. ನಮ್ಮ ರೈತರ ಬಗ್ಗೆ ಈ ಭಾಗದ ಶಾಸಕ ಮತ್ತು ಸಚಿವರು ದುರ್ಬಲರಾಗಿದ್ದಾರೆ. ಇವರಿಗೆ ಸರ್ಕಾರದ ಬಳಿ ಹೋಗಿ ಕೇಳಲು ಧೈರ್ಯವಿಲ್ಲ ಎಂದು ಲೇವಡಿ ಮಾಡಿದರು.
ರೈತರಿಗೆ ಅನ್ಯಾಯ ಮಾಡಿದರೆ ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಕಾಲುವೆಗೆ ನೀರು ಹರಿಸುವಂತೆ ನಾನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದೇನೆ. ಅಧಿಕಾರಿಗಳೇ ಸಿಎಂ ಅವರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು..
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ, ನಿಕಟಪೂರ್ವ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಮೆಲಪ್ಪ ಗುಳುಗಿ ಹಾಗೂ ಪರುಶುರಾಮ ಕುರಕುಂದಿ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಜಾಕ,ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜ ಹನುಮಂತ ನಾಯಕ,ಸಿದ್ದಣ್ಣ ಗೌಡ, ಶಿವರಾಜ ದೆಶಮುಖ, ರಾಜಶೇಖರ್ ಗೂಗಲ್, ರಾಜಶೇಖರ್ ಕಾಡಂನೊರ,ಶಹಾಪುರ ಗ್ರಾಮೀಣ ಮಂಡಲ ಅಧ್ಯಕ್ಷ ತಿರುಪತಿ ಹತಿಕಟಿಗಿ, ರಾಜುಗೌಡ ಉಕ್ಕಿನಾಳ, ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.....
ಪೋಲಿಸ್ ಧ್ವಜ ದಿನಾಚರಣೆ ಶಿಸ್ತು, ಶೃದ್ಧೆ, ಕರ್ತವ್ಯನಿಷ್ಠೆ ಬೆಳೆಸಿಕೊಳ್ಳಿ-ಗುಡ್ಡಳ್ಳಿ